ಅನಾಥರು....!
ಇರುವರೆಲ್ಲರು ಇಲ್ಲಿ, ಇದ್ದರು ನಾವಿಲ್ಲಿ ಅನಾಥರು,
ಎಲ್ಲರಂತೆಲ್ಲಾ ನಮ್ಮಲ್ಲೂ ಹರಿವಿದು ರಕುತ,
ಅನಾಥರೆಂದು ನಿಲ್ಲದು ಈ ಹೃದಯದ ಮಿಡಿತವು,
ಅನಾಥರೆಂಬ ಕುಲದ ಕೋಟೆಯ ಕಟ್ಟಿ ಬಂದಿಸಿದ್ದೀರಿ,
ನಿಮ್ಮ ಮೋಹದ ಪ್ರತಿ ಫಲದಿ ಹುಟ್ಟಿದೆ ಈ “ಅನಾಥರೆಂಬ ಕುಲವು”,
ಮಮತೆಯ ಬಯಸಿ ಕಾಯುತಿದೆ ಈ ಜೀವ,
ನಿಂದಿಸದೆ ನೋಡಿ ನಿಮ್ಮ ಮಕ್ಕಳಂತೆ,
ಪ್ರತಿಕ್ಷಣವು ಕಾಯುತಿದೆ ಈ ಜೀವವು ಕರುಣೆ, ಮಮತೆಯ ಕೊರಿ,
ಅನಾಥರು, ಅನಾಥರು, ಅನಾಥರು ಇದ್ದರು ನಾವಿಲ್ಲಿ ಅನಾಥರು!!!!!
No comments:
Post a Comment