Wednesday, February 2, 2011

ಕನಸು.....




ಅತಿ ಮಧುರ ಪ್ರತಿಕ್ಷಣವು ನಿನ್ನ ನೆನೆದರೆ
ನೆನೆಯುತ ತೇಲಿ ಬಂದೆ ನಾ ಬರಿದಾದ ಕಾಗದದಿ
ಬರೆದಿರುವೆ ನೀ ಕಣ್ಣಿನ ಸನ್ನೆಯಲಿ
ನನ್ನ ಅಂತರಾಳದ ಕನಸಿನ ಗುಟ್ಟನು,
ಕಾದಿರುವೆ ನಾ ಮುಳ್ಳಾಗಿ
ಚಿಗುರೊಡೆಯಲು ನೀ ಕನಸಿನ ಹೂವಾಗಿ
ನಿನ್ನ ಸ್ಪರ್ಶದಿ ಕೇಶವ ಅಲಂಕರಿಸಿ,
ನಿನ್ನಾಸೆಯ ಮಾವಿನ ಚಿಗುರಾಗಿ ಮುಗಿಲ ಸೇರಲು
ನನ್ನಾಸೆಯ ಗಾನವ ಹರಡಿದೆ ಕೋಗಿಲೆಯ ಗಾನವಾಗಿ,
ನೀ ಸಾಗಲು ಸಂಜೆಯ ಕಿರಣವಾಗಿ
ನಿನ್ನಿಷ್ಟದ ಪ್ರತಿಬಿಂಬವು ಹೊರಡುವುದು ಕಣ್ಣೀರಾಗಿ,
ಕತ್ತಲ ಬೆಳಗಿಸಲು ಬಂದಿರುವೆ ನೀ ಚಂದಿರನ ನೆರಳಾಗಿ
ಹೊಳೆಯುಥಿವೆ ನನ್ನ ಕನಸುಗಳು ಹೊಳೆವ ನಕ್ಷತ್ರಗಳಾಗಿ
ಸಾಗುತಿದೆ ಪ್ರತಿದಿನವು ಹೀಗೆ ನಿನ್ನ ಸಹಿ ನೆನಪುಗಳ ಮಧುರ ಕ್ಷಣಗಳು  ............