Monday, May 2, 2011













ಪ್ರೀತಿಸಲಾರೆನು ನಿನ್ನ ಹೀಗೆ
ಉಕ್ಕಿ ಹರಿಯುತಿದೆ ಖುಷಿಯುವು ಕಣ್ಣೀರಾಗಿ
ದೂರ ಹೋಗಲು ನಾ, ಏಕೆ ಕಾಡುತಿರುವೆ ನೀ ನನ್ನ ನೆರಳಾಗಿ,
ಕೊಂದು ಹಾಕಲು ನಾ, ಪ್ರತಿ ನಿಮಿಷವ ಪ್ರೀತಿ ಎಂಬ ಹಸುಗೂಸ,
ಹುಟ್ಟಿಬರುತಿರುವೆ ನೀ ನನ್ನಯ ಪ್ರತಿಬಿಂಬದ ನೆರಳಾಗಿ,
ಆವರಿಸಿರುವೆ ನೀ ಮರದಿ ಬಳ್ಳಿಯಂತೆ
ನಿನ್ನಿಷ್ಟದಿ ಬಡಿಯುತಿದೆ ಈ ಹೃದಯವ
ಚೆಲುವೆ ಏಕೆ ನೀ ಕಾಡುತಿರುವೆ,
ಕಾದು ಕುಳಿತಿರುವೆ ನಾ ನಿನ್ನಯ ಪ್ರತಿ ಬಿಂಬದ ನೀರ್ಗುದುರೆಯಂತೆ
ನದಿಯಾಗಿ ಸೇರಲು ಹೊರಟಿರುವೆ ನೀ,
ಪ್ರೀತಿಎಂಬ ಸಾಗರವ ಸೇರಲು
ನೀ ಅರಿಯದೆ ಕರಗಿ ಬೆರೆತಿರುವೆ,
ಕಲ್ಲೆಂಬ ಹೃದಯವು ಮರಳಾಗಿ ನಿನ್ನಲಿ

Monday, March 28, 2011

ವಿರಹ




















ಏಕೋ ಏನೂ ಕಾಣೆ ನಾ,
ಇರಲಾರೆ ನಿನ್ನ ಪ್ರೀತಿಸದೆ
ಏಕೆ ಕಾಡುತಿರುವೆ ನೀ ನಿನ್ನ ನಗುವ ಮೊಗದಿ
ಹನಿ ಹನಿಯಾಗಿ ಬಂದೆ ನಾ
ನಿನ್ನ ಕಡಲೆಂಬ ಮನಸ ಸೇರಲು,
ತ್ಯಜಿಸಿ ಹೋದೆಯ ನೀ ನನ್ನ ಪ್ರೇಮವ
ಅರ್ಥವಾಗದೆ ಹುಡುಕಲು ನಾ ಕಾರಣವ,
ಕೊಡುವೆಯ ನಿನ್ನ ನೋವನ್ನು,
ಹಿಂತಿರುಗಿ ಕೊಡುವೆ ನನ್ನ ಖುಷಿಯನ್ನು,
ಏಕೆ ಕಾಡುತಿರುವೆ ನೀ ನನ್ನ ನೆರಳಾಗಿ
ಕಳೆದಿರುವೆ ಪ್ರತಿ ಕ್ಷಣಗಳು ನಿನ್ನ ನೆನೆದು ಒಂದೊಂದು ವಸಂತವಾಗಿ,
ಬೆಂದು ಬರಡಾಯಿತು ಈ ನಿನ್ನೊಲುಮೆಯ ನಂದನ ವನವ,
ಕರುಣಿಸಿ ಕರಗದೆ ಏಕೆ ನಿನ್ನ ಕಲ್ಲೆಂಬ ಹೃದಯವು
ಬರುವೆ ನಿನ್ನ ಸನಿಹಕೆ, ಸಾಗಿ ಯುಗದಾಚೆಗು ಜಗದಾಚೆಗು
ತಿಳಿದು ಕುಡಿದೆ ನಾ ವಿಷವಾ, ಬದುಕುವೆನೆಂಬ ಆಸೆಯಲಿ
ತಿಳಿ ಆಯಿತೆ ಮನಸು, ಅಗಲಿದ ಆ ಹೃದಯದ ಬಡಿತವು ಈ ದೇಹದಿ

Wednesday, February 2, 2011

ಕನಸು.....




ಅತಿ ಮಧುರ ಪ್ರತಿಕ್ಷಣವು ನಿನ್ನ ನೆನೆದರೆ
ನೆನೆಯುತ ತೇಲಿ ಬಂದೆ ನಾ ಬರಿದಾದ ಕಾಗದದಿ
ಬರೆದಿರುವೆ ನೀ ಕಣ್ಣಿನ ಸನ್ನೆಯಲಿ
ನನ್ನ ಅಂತರಾಳದ ಕನಸಿನ ಗುಟ್ಟನು,
ಕಾದಿರುವೆ ನಾ ಮುಳ್ಳಾಗಿ
ಚಿಗುರೊಡೆಯಲು ನೀ ಕನಸಿನ ಹೂವಾಗಿ
ನಿನ್ನ ಸ್ಪರ್ಶದಿ ಕೇಶವ ಅಲಂಕರಿಸಿ,
ನಿನ್ನಾಸೆಯ ಮಾವಿನ ಚಿಗುರಾಗಿ ಮುಗಿಲ ಸೇರಲು
ನನ್ನಾಸೆಯ ಗಾನವ ಹರಡಿದೆ ಕೋಗಿಲೆಯ ಗಾನವಾಗಿ,
ನೀ ಸಾಗಲು ಸಂಜೆಯ ಕಿರಣವಾಗಿ
ನಿನ್ನಿಷ್ಟದ ಪ್ರತಿಬಿಂಬವು ಹೊರಡುವುದು ಕಣ್ಣೀರಾಗಿ,
ಕತ್ತಲ ಬೆಳಗಿಸಲು ಬಂದಿರುವೆ ನೀ ಚಂದಿರನ ನೆರಳಾಗಿ
ಹೊಳೆಯುಥಿವೆ ನನ್ನ ಕನಸುಗಳು ಹೊಳೆವ ನಕ್ಷತ್ರಗಳಾಗಿ
ಸಾಗುತಿದೆ ಪ್ರತಿದಿನವು ಹೀಗೆ ನಿನ್ನ ಸಹಿ ನೆನಪುಗಳ ಮಧುರ ಕ್ಷಣಗಳು  ............